Sri Raghavendra Swamy Matha

|| Hari Sarvōttama ||

|| Vāyu Jīvōttama ||

|| Gururājō Vijayatē ||

Shri Raghavendra Swamy Matha

11th Cross Road, Thyagarajanagar, Bangalore - 560070 | Mb: 99002 15389

ಶ್ರೀ ಶ್ರೀ ರಾಘವೇಂದ್ರಸ್ವಾಮಿ ಬೃಂದಾವನ ಸೇವಾ ಟ್ರಸ್ಟ್ ®

ಶ್ರೀ ರಾಘವೇಂದ್ರ ಸ್ವಾಮಿ ಮಠ

ತ್ಯಾಗರಾಜ ನಗರ, ಬೆಂಗಳೂರು.

ಟ್ರಸ್ಟ್ ಮುಂದಿನ ಮಹತ್ವಾಕಾಂಕ್ಷಿ ಯೋಜನೆಗಳು :

ಅತ್ಯಾಧುನಿಕ ಕಟ್ಟಡ ಯೋಜನೆ

ಶ್ರೀ ಮಠದ ಮುಂದಿನ ದಿನಗಳಲ್ಲಿ 4 ಮಹಡಿಗಳ ಅತ್ಯಾಧುನಿಕ ಕಟ್ಟಡವನ್ನು ಗುರುರಾಜರಿಗೆ ಸಮರ್ಪಿಸಲು ಸಂಕಲ್ಪಿಸಲಾಗಿದೆ.

ಕಟ್ಟಡವು ಆಧುನಿಕ ಪಾರ್ಕಿಂಗ್ ವ್ಯವಸ್ಥೆ, ಧ್ಯಾನಪ್ರವಚನ ಮಂದಿರ, ಆಧುನಿಕ ಅಡಿಗೆ ಮನೆ, ಒಂದು ಮಹಡಿಯಲ್ಲಿ ಕನಿಷ್ಠ 450 ಕುಳಿತುಕೊಳ್ಳಲು ಅನುಕೂಲವಾಗುವಂತೆ ವಿಶಾಲ ಹಾಲ್.

ಭಕ್ತರಿಗೆ ಎಲ್ಲಾ ಶುಭ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ 2 ಸಣ್ಣ ಹಾಲ್. ಕಟ್ಟಡಕ್ಕೆ ಲಿಫ್ಟ್  ಸೌಲಭ್ಯ ಹಾಗೂ ಇನ್ನಿತರ ಆದುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ.

ಬೃಹತ್ ಯೋಜನೆಯಲ್ಲಿ ನೀವೂ ನಿಮ್ಮ ಯಥಾ ಶಕ್ತಿ ಪಾಲ್ಗೊಳ್ಳಬಹುದು.

ಜ್ಞಾನ ಪ್ರಸಾರ ಯೋಜನೆ

ಶ್ರೀ ಮಠದಲ್ಲಿ ವರ್ಷಪೂರ್ತಿ ಜ್ಞಾನ ಪ್ರಸಾರ ಕಾರ್ಯಗಳುಮಧ್ವಾಚಾರ್ಯರ ಸಿದ್ಧಾಂತ ಪ್ರಸಾರ, ಪುರಾಣಗಳು, ಉಪನ್ಯಾಸಗಳನ್ನು ವರ್ಷಪೂರ್ತಿ ನಡೆಸಲು ಆಯೋಜಿಸಲಾಗಿದೆ.

ಕಾರ್ಯಕ್ಕೆ ಅನುಕೂಲವಾಗುವಂತೆ ವಿಶೇಷ ದತ್ತಿ ನಿಧಿಯನ್ನು ಸ್ಥಾಪಿಸಲು ಯೋಜಿಸಲಾಗಿದೆ.

ಯೋಜನೆಯಲ್ಲಿ ತಾವೂ ಪಾಲ್ಗೊಳ್ಳಬಹುದು. ಯೋಜನೆಯಲ್ಲಿ ಒಂದು ಉಪನ್ಯಾಸದ ಸೇವೆಯನ್ನು ತಮ್ಮ ಸೇವೆಯಲ್ಲಿ ನಡೆಸಬಹುದು

ಗೋ ಸಂರಕ್ಷಣಾ ಯೋಜನೆ.

ಗೋವಿನ ಸಂರಕ್ಷಣೆಯು ನಮ್ಮ ಆದ್ಯ ಕರ್ತವ್ಯದಲ್ಲಿ ಒಂದಾಗಿದೆ.

ವಿಶೇಷವಾಗಿ ಮಲೆನಾಡಿನ ಅತ್ಯುತ್ತಮ ತಳಿಗಳ ಗೋವುಗಳನ್ನು ಸಂರಕ್ಷಿಸುವುದು, ಗೋವಿನ ಸೇವೆಗೆ, ಈಗಾಗಲೇ  ನಮ್ಮದೇ ಆದ ಗೋಶಾಲೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿಇನ್ನೂ ದೊಡ್ಡ ಮಟ್ಟದಲ್ಲಿ ಗೋಸೇವೆ ಮುಂದುವರಿಸಲು  ಸಂಕಲ್ಪಿಸಲಾಗಿದೆ.

ವೈದಿಕ ಶಿಕ್ಷಣ

ಶ್ರೀ ಮಠದಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ವೈದಿಕ ಶಿಕ್ಷಣ, ಶ್ಲೋಕಗಳು, ಮಂತ್ರಗಳು, ಸೂಕ್ತಗಳು, ದೇವತಾ ಪೂಜಾ ವಿಧಾನಗಳು ಕಲಿಸಲು ವೇದಿಕೆಯನ್ನು ಸಿದ್ಧಪಡಿಸಲಾಗಿದೆ.

ಮಂತ್ರ ಸ್ತೋತ್ರ ತರಗತಿಗಳು ಈಗಾಗಲೇ ಪ್ರಾರಂಭಾಗಿದ್ದು ಇತರ ತರಗತಿಗಳನ್ನು ಸದ್ಯದಲ್ಲೇ ಪ್ರಾರಂಭಿಸಲು ಯೋಜಿಸಲಾಗಿದೆ

ಎಲ್ಲಾರೂ ಈ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಸಾಂಸ್ಕೃತಿಕ ಶಿಕ್ಷಣ

ಶ್ರೀ ಮಠವನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕ ಶ್ರದ್ದಾ ಕೇಂದ್ರವಾಗಿ ಮಾರ್ಪಡಿಸಲು ಕಟಿಬದ್ಧವಾಗಿದೆ, ಯೋಜನೆಯಲ್ಲಿ ಸಂಗೀತ, ಭರತನಾಟ್ಯ ತಾಳವಾದ್ಯ ಮೊದಲಾದ ಕಲೆಗಳನ್ನು ಹೇಳಿಕೊಡಲಾಗುವುದು.

Scroll to Top